ದೂರುಗಳು

ರಸ್ತೆ ಸುರಕ್ಷತೆ

ರಸ್ತೆ ಸುರಕ್ಷತಾ ಚಟುವಟಿಕೆಗಳ ಪಕ್ಷಿನೋಟ

ಮಾನ್ಯ ಸರ್ವೋಚ್ಛ ನ್ಯಾಯಾಲಯವು ದೇಶದಾದ್ಯಂತ ರಸ್ತೆ ಸುರಕ್ಷತಾ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಲು ಸರ್ಕಾರದ ಆದೇಶ ದಿ:30-05-2014 ರನ್ವಯ ಒಂದು ಸಮಿತಿಯನ್ನು “ಸರ್ವೋಚ್ಛ ನ್ಯಾಯಾಲಯದ ರಸ್ತೆ ಸುರಕ್ಷತಾ ಸಮಿತಿ" ಯನ್ನು ರಚಿಸಿರುತ್ತದೆ.  ಈ ಸಮಿತಿಯು ದೇಶಾದ್ಯಂತ ರಸ್ತೆ ಸುರಕ್ಷತಾ ಚಟುವಟಿಕೆಗಳನ್ನು ಉಸ್ತುವಾರಿ ಮಾಡುತ್ತದೆ.  ಸದರಿ ರಸ್ತೆ ಸುರಕ್ಷತಾ ಸಮಿತಿಯು ರಾಜ್ಯಗಳಿಗೆ ಅಪಘಾತ ಸಂಭವಿಸುವ ಜಾಗಗಳನ್ನು ಅಭಿವೃದ್ಧಿಪಡಿಸಲು ಮಾರ್ಗೋಪಾಯಗಳನ್ನು ಕೈಗೊಳ್ಳಲು ನಿರ್ದೇಶನ ನೀಡಿರುತ್ತದೆ ಹಾಗೂ ಕಾಲಮಿತಿಯೊಳಗೆ ಗುರುತಿಸಲಾಗಿರುವ ಕಪ್ಪುಸ್ಥಳಗಳನ್ನು ಸರಿಪಡಿಸಲು ಯೋಜನೆಗಳನ್ನು ಕೈಗೊಳ್ಳಲು ನಿರ್ದೇಶಿಸಿರುತ್ತದೆ.  ಈ ಸಮಿತಿಯು ರಾಜ್ಯಗಳಿಗೆ ವಾರ್ಷಿಕ ಕ್ಯಾಲೆಂಡರ್‌ ತಯಾರಿಸಲು / ಕಪ್ಪು ಸ್ಥಳಗಳನ್ನು ನಿರ್ವಹಿಸಲು ಕ್ರಮಗಳನ್ನು ಕೈಗೊಳ್ಳಲು ನಿರಂತರವಾಗಿ ನಿರ್ದೇಶಿಸುತ್ತಿದೆ.

ಸರ್ವೋಚ್ಛ ನ್ಯಾಯಾಲಯದ ಸರ್ವೋಚ್ಛ ನ್ಯಾಯಾಲಯದ ರಸ್ತೆ ಸುರಕ್ಷತಾ ಸಮಿತಿಯ ನಿರ್ದೇಶನದಂತೆ ಕರ್ನಾಟಕ ಸರ್ಕಾರವು  ಆದೇಶ ಸಂ: ಎಸ್‌ಎಆರ್‌ಐಇ:103:ಎಸ್‌ಎಇಪಿಎ:2015, ದಿ:21-09-2015 ರನ್ವಯ “ಕರ್ನಾಟಕ ರಸ್ತೆ ಸುರಕ್ಷತಾ ನೀತಿ” ಯನ್ನು ಜಾರಿಗೆ ತಂದಿದ್ದು, ಈ ನೀತಿಯು ಇಲಾಖೆಯ ಪಾಲುದಾರ ಸಂಸ್ಥೆಗಳಿಗೆ ಮತ್ತು ಸಾರ್ವಜನಿಕರಿಗೆ (ಎ) ರಸ್ತೆ ಬಳಕೆದಾರರಿಗೆ ಸುರಕ್ಷಿತ ರಸ್ತೆ ಜಾಲವನ್ನು ಒದಗಿಸುವ ದೃಷ್ಟಿಯಿಂದ,  ಪಾದಚಾರಿಗಳಿಗೆ ಮತ್ತು ಸೈಕಲ್‌ ಸವಾರರಿಗೆ ಆದ್ಯತೆ ನೀಡಿ, ಮುಂಬರುವ ದಿನಗಳಲ್ಲಿ ಶೇಕಡ ೦% ರಷ್ಟು ಅಪಘಾತಗಳನ್ನು ಸಾಧಿಸಲು ಮತ್ತು (ಬಿ) 2020 ರೊಳಗೆ 25% ರಷ್ಟು ಅಪಘಾತಗಳನ್ನು ಮತ್ತು 30% ಜೀವಹಾನಿಗಳನ್ನು ಕಡಿಮೆ ಮಾಡುವ ಗುರಿ ಹೊಂದಿದೆ.

ಸರ್ವೋಚ್ಛ ನ್ಯಾಯಾಲಯದ ರಸ್ತೆ ಸುರಕ್ಷತಾ ಸಮಿತಿಯ ಶಿಫಾರಸ್ಸಿನಂತೆ ಕರ್ನಾಟಕ ಸರ್ಕಾರವು ಸ್ಟ್ಯಾಂಡರ್ಡ್‌ ಆಪರೇಶನ್‌ ಪ್ರೊಸೀಜರ್‌ (ಎಸ್‌ಒಪಿ) ಯನ್ನು ರಚಿಸಿರುತ್ತದೆ ಮತ್ತು ಸರ್ಕಾರದ ಆದೇಶ ಸಂ: ಲೋಇ:42:ಇಎಪಿ:2017, ಬೆಂಗಳೂರು ದಿ:4-4-2017 ರನ್ವಯ ಅಪಘಾತ ಕಪ್ಪು ಸ್ಥಳಗಳನ್ನು ಗುರುತಿಸಲು ಮತ್ತು ಅದನ್ನು ಸರಿಪಡಿಸಲು ಕಾಲಮಿತಿಯೊಳಗೆ ಕ್ರಿಯಾ ಯೋಜನೆ ರೂಪಿಸಲು ಒಂದು ಪ್ರೋಟೋಕಾಲ್‌ ನ್ನು ಹೊರಡಿಸಿರುತ್ತದೆ.  ಈ ಪ್ರೋಟೋಕಾಲ್‌ ಅನ್ವಯ ಯೋಜನೆ ಮತ್ತು ರಸ್ತೆಗಳ ಆಸ್ತಿ ನಿರ್ವಹಣಾ ಕೇಂದ್ರವು ರಸ್ತೆ ಸುರಕ್ಷತಾ ಕೋಶದಿಂದ ಕಪ್ಪು ಸ್ಥಳಗಳ ದತ್ತಾಂಶವನ್ನು ಸಂಗ್ರಹಿಸಿ, ದತ್ತಾಂಶವನ್ನು ಪರಿಶೀಲಿಸಿ, ಕಪ್ಪುಸ್ಥಳಗಳಿಗೆ ಯುನಿಕ್‌ ಕೋಡ್‌ಗಳನ್ನು ನೀಡಿ, ಈ ಕಪ್ಪು ಸ್ಥಳಗಳನ್ನು ನಿವಾರಿಸಲು ದೀರ್ಘಾವಧಿ ಪರಿಹಾರ ಕ್ರಮಗಳನ್ನು ಪ್ರಾರಂಭಿಸುವುದಾಗಿರುತ್ತದೆ.

ಕರ್ನಾಟಕ ಸರ್ಕಾರವು ರಸ್ತೆ ಸುರಕ್ಷತಾ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಲು ಮತ್ತು ರಸ್ತೆ ಸುರಕ್ಷತಾ ನಿಧಿಯನ್ನು ಸ್ಥಾಪಿಸಲು ಮತ್ತು ಇತರೆ ಸಂಬಂಧಿತ ಚಟುವಟಿಕೆಗಳನ್ನು ಕೈಗೊಳ್ಳಲು ರಸ್ತೆ ಸುರಕ್ಷತಾ ಪ್ರಾಧಿಕಾರವನ್ನು “ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ಕಾಯ್ದೆ, 2017” ಅಧಿಸೂಚನೆ ಸಂ: ಸಂವ್ಯಶೇ:35:ಶಾಸನ:2017, ಬೆಂಗಳೂರು ದಿ:7-12-2017 ರನ್ವಯ ಸೃಜಿಸಿರುತ್ತದೆ.

ಮುಂದುವರೆದು, ಸರ್ವೋಚ್ಛ ನ್ಯಾಯಾಲಯದ ರಸ್ತೆ ಸುರಕ್ಷತಾ ಸಮಿತಿಯ ನಿರ್ದೇಶನದಂತೆ ಆದೇಶ ಸಂ: ಲೋಇ:190:ಇಎಪಿ:2018, ಬೆಂಗಳೂರು ದಿ:12-10-2018 ರನ್ವಯ ಲೋಕೋಪಯೋಗಿ ಇಲಾಖೆ ಅಧೀನದಲ್ಲಿನ ಯೋಜನೆ ಮತ್ತು ರಸ್ತೆಗಳ ಆಸ್ತಿ ನಿರ್ವಹಣಾ ಕೇಂದ್ರವನ್ನು “ಶಾಶ್ವತ ರಸ್ತೆ ಸುರಕ್ಷತಾ ಕೋಶ” ವನ್ನಾಗಿ ಕಾರ್ಯ ನಿರ್ವಹಿಸಲು ಆದೇಶಿಸಿರುತ್ತದೆ.  ಈ ಆದೇಶದನ್ವಯ ಮುಖ್ಯ ಇಂಜಿನಿಯರ್‌, ಪಿಆರ್‌ಎಎಂಸಿ ರವರ ಅಧ್ಯಕ್ಷತೆಯಲ್ಲಿ ರಸ್ತೆ ಸುರಕ್ಷತಾ ಕಾರ್ಯಗಳನ್ನು ನಡೆಸಲಾಗುತ್ತದೆ. ಪ್ರಧಾನ ಇಂಜಿನಿಯರ್‌, ಯೋ.ರ.ಆ.ನಿ.ಕೇ ರವರ ನೇತೃತ್ವದಲ್ಲಿ, ರಾಜ್ಯ ಹೆದ್ದಾರಿಗಳಲ್ಲಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳಲ್ಲಿ ಅಪಘಾತಗಳನ್ನು ನಿಯಂತ್ರಿಸಲು IRC ಮಾನದಂಡಗಳ ಪ್ರಕಾರ ಸೂಕ್ತ ನಿಯಮಗಳನ್ನು ರೂಪಿಸುವುದು, ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ರಸ್ತೆ ಸುರಕ್ಷತಾ ಕಾಮಗಾರಿಗಳ ಕ್ರಿಯಾಯೋಜನೆ, ಕಾರ್ಯಾಚರಣೆ ಹಾಗೂ ಕಾಮಗಾರಿಗಳ ನಿರ್ವಹಣೆ ಮತ್ತು ಮೇಲುಸ್ತುವಾರಿ ಮಾಡುವುದು ಈ ಕೋಶದ ಧ್ಯೇಯೋದ್ದೇಶಗಳಾಗಿರುತ್ತದೆ.

ಕಪ್ಪುಚುಕ್ಕೆ ದತ್ತಾಂಶವನ್ನು ಯೋ.ರ.ಆ.ನಿ.ಕೇಂದ್ರದಲ್ಲಿ ನಿರಂತರವಾಗಿ ಕ್ರೋಡೀಕರಿಸಲಾಗುತ್ತಿದೆ. ಲೋಕೋಪಯೋಗಿ ಇಲಾಖೆ ಅಡಿಯಲ್ಲಿ ಬರುವ ಕಪ್ಪುಚುಕ್ಕೆ ವಿವರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ.

ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳಲ್ಲಿ ಬರುವ ಜಂಕ್ಷನ್‌ ಗಳ ವಿವರಗಳು (ಜಿಲ್ಲಾವಾರು)

ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ಸಭೆಗಳು 

ರಸ್ತೆ ಸುರಕ್ಷತಾ ಕಾಮಗಾರಿ ಸ್ಥಳಗಳ ಕೈಪಿಡಿ

ಭಾಗ - ಎ : ರಸ್ತೆ ಸುರಕ್ಷತಾ ಆಡಿಟ್‌ ತತ್ವಗಳು

ಭಾಗ - ಬಿ : ರಸ್ತೆ ಸುರಕ್ಷತಾ ಆಡಿಟ್ ನ ಪ್ರಮುಖ ಹಂತಗಳು

ಭಾಗ - ಸಿ : ಕರ್ನಾಟಕ ರಾಜ್ಯದ ಹೆದ್ದಾರಿಗಳಲ್ಲಿನ ಕಾಳಜಿಗಳು

ಭಾಗ - ಡಿ : ರಸ್ತೆ ಸುರಕ್ಷತಾ ಆಡಿಟ್ ಚೆಕ್‌ ಲಿಸ್ಟಗಳು

ಇತ್ತೀಚಿನ ನವೀಕರಣ​ : 16-02-2021 04:39 PM ಅನುಮೋದಕರು: Approver kpwd


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಲೋಕೋಪಯೋಗಿ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080