ಕಟ್ಟಡಗಳು

ಕಟ್ಟಡಗಳು

ಲೋಕೋಪಯೋಗಿ ಇಲಾಖೆಯು ಸರ್ಕಾರಿ ಕಟ್ಟಡಗಳ ನಿರ್ಮಾಣ ಮತ್ತು ನಿರ್ವಹಣೆ ಕಾರ್ಯದ ಜವಾಬ್ದಾರಿ ಹೊತ್ತಿರುತ್ತದೆ. ಈ ಇಲಾಖೆಯು ಕಟ್ಟಡಗಳ ನಿರ್ಮಾಣ ಮತ್ತು ನಿರ್ವಹಣೆಗೆ ತನ್ನದೇ ಆದ ಬಜೆಟ್ ಹೊಂದಿದ್ದರೂ ಸಹಾ, ಬೇರೆ ಇಲಾಖೆಗಳ ಕಟ್ಟಡ ನಿರ್ಮಾಣ ಮತ್ತು ನಿರ್ವಹಣೆ ಕಾರ್ಯವನ್ನು ಠೇವಣಿ ವಂತಿಗೆ ಕಾಮಗಾರಿ (Deposit Contribution Works) ಅಡಿ ತೆಗೆದುಕೊಳ್ಳುತ್ತದೆ.

ಲೋಕೋಪಯೋಗಿ ಇಲಾಖೆಯ ಕಟ್ಟಡಗಳನ್ನು ೨ ವಿಭಾಗಗಳಾಗಿ ವಿಂಗಡಿಸಬಹುದು ಅವೆಂದರೆ ಸಾಂಸ್ಥಿಕ / ವಾಣಿಜ್ಯ ಕಟ್ಟಡಗಳು ಮತ್ತು ವಾಸಕ್ಕೆ ಸಂಬಂಧಿಸಿದ ಕಟ್ಟಡಗಳು. ಮೊದಲನೇ ವಿಭಾಗವು ಕಛೇರಿ ಕಟ್ಟಡಗಳನ್ನು, ವಾಣಿಜ್ಯ ಸಂಕೀರ್ಣಗಳನ್ನು, ಕಾಲೇಜುಗಳು, ಹಾಸ್ಟೆಲುಗಳು, ಗ್ರಂಥಾಲಯಗಳು ಇತ್ಯಾದಿಗಳನ್ನು ಒಳಗೊಂಡಿರುತ್ತದೆ, ವಾಸಕ್ಕೆ ಸಂಬಂಧಿಸಿದ ಕಟ್ಟಡಗಳು ವಸತಿ ಗೃಹ ಮತ್ತು ಹಾಸ್ಟೆಲ್‌ಗಳನ್ನುಒಳಗೊಂಡಿರುತ್ತದೆ.

ಸಣ್ಣ ಕಾಮಗಾರಿಗಳನ್ನು ಬಜೆಟ್ ಶೀರ್ಷಿಕೆ ೨೦೫೯ ಮತ್ತು ೨೨೧೬ ಅಡಿಯಲ್ಲಿ ತೆಗೆದುಕೊಂಡರೆ, ಬೃಹತ್ ಕಾಮಗಾರಿಗಳನ್ನು ಬಜೆಟ್ ಶೀರ್ಷಿಕೆ ೪೦೫೯ ಮತ್ತು ೪೨೧೬ ಅಡಿಯಲ್ಲಿ ತೆಗೆದುಕೊಳ್ಳಲಾಗಿದೆ. ಇದರ ಜೊತೆಗೆ ಬೇರೆ ಇಲಾಖೆಗಳ ಬಜೆಟ್ ಶೀರ್ಷಿಕೆಗಳಡಿಯಲ್ಲಿ ಕೂಡಾ ಕಟ್ಟಡ ನಿರ್ಮಾಣ ಕಾರ್ಯಕ್ರಮಗಳಿದ್ದು, ಅದಕ್ಕಾಗಿ ಆಯಾ ಬಜೆಟ್ ಶೀರ್ಷಿಕೆಗಳಡಿಯಲ್ಲಿ ಬಜೆಟ್ ಹಂಚಿಕೆ ಆಗಿರುತ್ತದೆ.

ಲೋಕೋಪಯೋಗಿ ಇಲಾಖೆಯು ೨ ರೀತಿಯ ಕಟ್ಟಡ ದುರಸ್ತಿ ಗಳನ್ನು ಕೈಗೊಳ್ಳುತ್ತದೆ. ಅವುಗಳೆಂದರೆ ಸಾಮಾನ್ಯ ದುರಸ್ತಿ ಮತ್ತು ವಿಶೇಷ ದುರಸ್ತಿ. ಸಾಮಾನ್ಯ ದುರಸ್ತಿ ಕಾರ್ಯವನ್ನು ಪ್ರತಿ ವರ್ಷ ಕೈಗೊಳ್ಳಲಾಗುವುದು ಮತ್ತು ಸುಣ್ಣ ಬಳಿಯುವಿಕೆ, ಕಲರ್ ವಾಷಿಂಗ್, ತೇಪೆಗಳನ್ನು ದುರಸ್ತಿ ಮಾಡುವುದು, ಸಣ್ಣಪುಟ್ಟ ಮುರಿದ ಭಾಗಗಳನ್ನು ಬದಲಾಯಿಸುವಿಕೆ, ಬಾಗಿಲುಗಳಿಗೆ ಪ್ಯೆಂಟ್ ಮಾಡುವ ಕೆಲಸ ಇತ್ಯಾದಿ ಕೆಲಸಗಳನ್ನು ಒಳಗೊಂಡಿರುತ್ತದೆ. ಕಡಿಮೆ ಪದೇ ಪದೇ ಬರುವಂತಾದ ವಿಶೇಷ ದುರಸ್ತಿ ಕಾರ್ಯಗಳ ಅಡಿಯಲ್ಲಿ ಕಟ್ಟಡಗಳ ಹಾನಿಯಾದ ಭಾಗಕ್ಕೆ ದುರಸ್ತಿ, ಕಟ್ಟಡದ ನೆಲಹಾಸಿನ, ಬಾಗಿಲು ಮತ್ತು ಕಿಟಕಿಗಳ ದುರಸ್ತಿ ಹಾಗೂ ನೀರು ಸರಬರಾಜು ಮತ್ತು ಒಳಚರಂಡಿಯ ಭಾಗಗಳನ್ನು ಮರುಜೋಡಣೆ ಮಾಡುವುದನ್ನು ಒಳಗೊಂಡಿರುತ್ತದೆ.

 

ಆನಂದರಾವ್‌ ವೃತ್ತದ ಎನ್.ಎಚ್.ಕಾಂಪೌಂಡ್ ನಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಅವಳಿ ಗೋಪುರ ಯೋಜನೆ ಬಗ್ಗೆ ಸನ್ಮಾನ್ಯ ಶ್ರೀ ಗೋವಿಂದ ಎಂ. ಕಾರಜೋಳ, ಉಪಮುಖ್ಯ ಮಂತ್ರಿಗಳು ಹಾಗೂ ಲೊಕೋಪಯೋಗಿ ಸಚಿವರು ಇವರಿಂದ ದಿ. 11-12-2020 ರಂದು ಮಾಧ್ಯಮ ಗೋಷ್ಠಿ

Last Updated : 15-12-2020 12:32 PM
Modified By : Approver kpwd


ಹಕ್ಕುತ್ಯಾಗ :

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

 • ನಮ್ಮ ಬಗ್ಗೆ
 • ಜಾಲನಕ್ಷೆ
 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು
 • ಗೌಪ್ಯತಾ ನೀತಿ
 • ಸಹಾಯ
 • ಪರದೆ ವಾಚಕ
 • ಮಾರ್ಗಸೂಚಿಗಳು
 • ಆವೃತ್ತಿ : CeG/KRN 2.0
 • ಸಂದರ್ಶಕರು : 2994
 • ಇತ್ತೀಚಿನ ನವೀಕರಣ : 08-04-2021 11:16 AM
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಲೋಕೋಪಯೋಗಿ ಇಲಾಖೆ
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ - ವೆಬ್ ಪೋರ್ಟಲ್, ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ