ದೂರುಗಳು

ಯೋಜನೆ ಮತ್ತು ರಸ್ತೆಗಳ ಆಸ್ತಿ ನಿರ್ವಹಣಾ ಕೇಂದ್ರ (PRAMC)

ಯೋಜನೆ ಮತ್ತು ರಸ್ತೆಗಳ ಆಸ್ತಿ ನಿರ್ವಹಣಾ ಕೇಂದ್ರ

 

ವಿಶ್ವ ಬ್ಯಾಂಕ್ ಮತ್ತು ಏಷಿಯನ್ ಡೆವಲಪ್‌ಮೆಂಟ್ ಬ್ಯಾಂಕ್ ರವರು ಕರಾಹೆಅಯೋ- II  (KSHIP-II) ಗೆ  ಸಾಲ ನೀಡುವ ಕುರಿತು ಮುಂದುವರೆದ ಭಾಗದ ಚರ್ಚೆಯಲ್ಲಿ ಹಲವಾರು ಸಾಂಸ್ಥಿಕ ಅಭಿವೃದ್ಧಿ ಮತ್ತು ಸಾಮರ್ಥ್ಯ ವಿಕಾಸನೆ ಮಾನದಂಡಗಳನ್ನು ಲೋಕೋಪಯೋಗಿ ಇಲಾಖೆಯ ವತಿಯಿಂದ ತೆಗೆದುಕೊಳ್ಳುವುದು,  ಸಾಲ ಮಂಜೂರಾತಿ ಪ್ರಕ್ರಿಯೆಯ ಭಾಗವಾಗಿರುತ್ತದೆಂದು ತಿಳಿಸಿರುತ್ತಾರೆ. ವಿಶ್ವ ಬ್ಯಾಂಕ್ ಮತ್ತು ಏಷಿಯನ್ ಡೆವಲಪ್‌ಮೆಂಟ್ ಬ್ಯಾಂಕ್ ಗಳ ಜಂಟಿ ನಿಯೋಗ (Mission) ಜೂನ್ 2010 ರಲ್ಲಿ ಲೋಕೋಪಯೋಗಿ ಇಲಾಖೆಯೊಂದಿಗೆ ನಡೆದ ಮುಂದುವರೆದ ವ್ಯಾಪಕ ಚರ್ಚೆಯಲ್ಲಿ ವಿಶ್ವಬ್ಯಾಂಕ್ ಮತ್ತು ಎಡಿಬಿ ನವರು ಸಾಂಸ್ಥಿಕ ಅಭಿವೃದ್ಧಿ ಕಾರ್ಯನೀತಿ ಮತ್ತು ಕಾರ್ಯಯೋಜನೆಗಳಿಗೆ ಒಪ್ಪಿ ಅವುಗಳು ಮೂಲ ಆದ್ಯತೆಯ ಕಾರ್ಯವೆಂದು ಒಪ್ಪಿರುತ್ತಾರೆ.

 ಲೋಕೋಪಯೋಗಿ ಇಲಾಖೆಯು ಸರ್ಕಾರದ ಆದೇಶ ಸಂ: ಲೋಇ:11:ಇಎಪಿ:2011, ದಿ:23-8-2012 ರಡಿಯಲ್ಲಿ ಯೋಜನೆ ಮತ್ತು ರಸ್ತೆಗಳ ಆಸ್ತಿ ನಿರ್ವಹಣಾ ಕೇಂದ್ರವನ್ನು ಸ್ಥಾಪಿಸಿದ್ದು, ಮುಖ್ಯ ಇಂಜಿನಿಯರ್ ರವರು ಈ ಕೇಂದ್ರದ ಮುಖ್ಯಸ್ಥರಾಗಿರುತ್ತಾರೆ.  ಈ ಕೇಂದ್ರದ ಕಾರ್ಯವ್ಯಾಪ್ತಿಯು ನೀತಿ ಅಭಿವೃದ್ಧಿಪಡಿಸುವಿಕೆ ಮತ್ತು ಯೋಜನೆ ತಯಾರಿಸುವುದು, ಕಾರ್ಯಕ್ರಮ ರೂಪಿಸುವಿಕೆ, ರಸ್ತೆ ಸುರಕ್ಷತೆ ಮತ್ತು ಇಡೀ ಇಲಾಖೆಗೆ ಮಾಹಿತಿ ತಂತ್ರಜ್ಞಾನದ ಬೆಂಬಲ ಮತ್ತು ತರಬೇತಿ ನೀಡುವುದನ್ನು ಒಳಗೊಂಡಿರುತ್ತದೆ.  ಯೋಜನೆ ಮತ್ತು ರಸ್ತೆಗಳ ಆಸ್ತಿ ನಿರ್ವಹಣಾ ಕೇಂದ್ರವು, ರಾಜ್ಯದ ರಸ್ತೆಗಳಿಗೆ ಯೋಜನೆ ರೂಪಿಸುವ, ಬಜೆಟ್ ತಯಾರಿಸುವ, ಕಾರ್ಯಕ್ರಮ ಯೋಜಿಸುವ, ರಸ್ತೆ ಸುರಕ್ಷತೆ, ಮಾಹಿತಿ ತಂತ್ರಜ್ಞಾನವನ್ನು ಇಲಾಖೆಯಲ್ಲಿ ಬಲಪಡಿಸುವ ಮತ್ತು ಇಲಾಖೆಯಲ್ಲಿ ತರಬೇತಿ ಆಯೋಜಿಸುವ ಒಂದು ಸಂಘಟನಾ ಕೇಂದ್ರ ಕಛೇರಿಯಾಗಿರುತ್ತದೆ. 

ಯೋಜನೆ ಮತ್ತು ರಸ್ತೆಗಳ ಆಸ್ತಿ ನಿರ್ವಹಣಾ ಕೇಂದ್ರದ (PRAMC)  ಉಪ ಘಟಕಗಳು ಈ ರೀತಿ ಇದೆ:

 1. ನೀತಿಗಳನ್ನು ಯೋಜಿಸುವ ಘಟಕ
 2. ಕಾರ್ಯಕ್ರಮಗಳನ್ನು ರೂಪಿಸುವ ಘಟಕ
 3. ಮಾಹಿತಿ ತಂತ್ರಜ್ಞಾನ ಘಟಕ
 4. ರಸ್ತೆ ಸುರಕ್ಷತಾ ಘಟಕ
 5. ತರಬೇತಿ ಘಟಕ

ರಸ್ತೆಗಳ / ಸೇತುವೆಗಳ ಸ್ಥಿತಿಗತಿಗಳ ವಿವರವನ್ನು ಸಂಗ್ರಹಿಸಲು ಈ ಕೆಳಕಂಡ ಸ್ಟೇಟ್-ಆಫ್-ದ-ಆರ್ಟ್ ಉಪಕರಣಗಳನ್ನು ಏಷಿಯನ್‌ ಡೆವಲಪ್‌ಮೆಂಟ್‌ ಬ್ಯಾಂಕ್‌ ರವರ ಸಹಕಾರದಿಂದ ಯೋಜನೆ ಮತ್ತು ರಸ್ತೆಗಳ ಆಸ್ತಿ ನಿರ್ವಹಣಾ ಕೇಂದ್ರದ (PRAMC)  ವತಿಯಿಂದ ಸಂಗ್ರಹಣೆ ಮಾಡಲಾಗಿದೆ. 

 • Road Condition Data Collection Vehicle (RCDCV)
 • Falling Weight Deflectometer (FWD)
 • Ground Penetrating Radar (GPR)
 • Bridge Inspection Vehicle (BIV)

ಇಡೀ ಸಿಆರ್‌ಎನ್‌ ರಸ್ತೆಗಳ ಸ್ಥಿತಿಗತಿಗಳ ದತ್ತಾಂಶಗಳನ್ನು ಈ ಮೇಲ್ಕಂಡ ಉಪಕರಣಗಳನ್ನು ಉಪಯೋಗಿಸಿಕೊಂಡು ಸಂಗ್ರಹಿಸಲಾಗುತ್ತದೆ.  ಈ ರೀತಿ ಸಂಗ್ರಹಿಸಿದ ದತ್ತಾಂಶಗಳನ್ನು Karnataka Road Asset Management System (KRAMS) ನಲ್ಲಿ ವಿಶ್ಲೇಷಣೆ ಮಾಡಿ,  ಇಂಜಿನಿಯರಿಂಗ್ ತತ್ವಗಳು ಮತ್ತು ಉತ್ಕೃಷ್ಟ ಇಂಜಿನಿಯರಿಂಗ್ ಅಭ್ಯಾಸಗಳನ್ನು ಹಾಗೂ ಇಲಾಖೆಯಲ್ಲಿ ಬದ್ಧತೆ ಇರುವ ಮತ್ತು ಚಾಲ್ತಿಯಲ್ಲಿರುವ  ಕಾಮಗಾರಿಗಳನ್ನು ಗಮನದಲ್ಲಿಟ್ಟುಕೊಂಡು ವಾರ್ಷಿಕ ಕ್ರಿಯಾ ಯೋಜನೆಯನ್ನು ತಯಾರಿಸಲಾಗುತ್ತದೆ.  ವಿಶ್ವಬ್ಯಾಂಕ್ ನವರು ತೊಡಗಿಸಿರುವ HDM4 ತಂತ್ರಾಂಶದ ಫಲಶ್ರುತಿಯ ಆಧಾರದ ಮೇಲೆ ತಯಾರಿಸಲಾಗುತ್ತದೆ.  ಈ ತಂತ್ರಾಶವನ್ನು ಜಾಗತಿಕ ಮಟ್ಟದಲ್ಲಿ ವಿಶ್ವದಾದ್ಯಂತ ಬಹುತೇಕ ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳಲ್ಲಿ,  ರಸ್ತೆ ನಿರ್ವಹಣೆ ಮಾಡಲು ಮತ್ತು ಪುನಶ್ಚೇತನ ಆಯವ್ಯಯಗಳನ್ನು ತಯಾರಿಸಲು ಉಪಯೋಗಿಸಲಾಗುತ್ತಿದೆ.

 

The Bridge Inspection Vehicle (BIV) has the facility to reach the under parts and sides of the bridges, where deterioration remains unnoticed.  This equipment facilitates more accurate assessment for the physical and functional condition of Bridge.  Inspections are performed in addition of the structure in detail and conduct the ND testing of Bridges at critical parts (such as the Soffit of the super structure, Bearing Locations etc.).  Using BIV, inspection can be carried out without affecting the traffic movement over the bridge or with very minimal effect to the traffic.

Till now 140 Major Bridges have been inspected using BIV and 287 major bridges have been inspected Manually; the summary reports of the inspected reports as below.

 1. Major Bridge summary Report - Part-1
 2. Major Bridge summary Report - Part-2
 3. Major Bridge summary Report - Part-3

 

 

 

ಇತ್ತೀಚಿನ ನವೀಕರಣ​ : 22-12-2020 11:30 AM ಅನುಮೋದಕರು: Approver kpwdಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಲೋಕೋಪಯೋಗಿ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080