ದೂರುಗಳು

ಇತಿಹಾಸ

ಮೂಲಭೂತ ಸೌಕರ್ಯ ಅಭಿವೃದ್ಧಿಯೆಡೆಗೆ ರಸ್ತೆಯ ಮುಖಾಂತರ ಪಯಣ

ಭಾರತದಲ್ಲಿ ರಸ್ತೆ ಮತ್ತು ಕಟ್ಟಡಗಳು ಪುರಾತನವಾಗಿದ್ದು, ಹರಪ್ಪ ಮತ್ತು ಮೊಹೆಂಜಾದಾರೋ ನಾಗರೀಕತೆಯ ಅಭಿವೃದ್ಧಿಯ ಜೊತೆಗೇ ಆಗಿರುತ್ತದೆ. ಭಾರತದ ವಾಯುವ್ಯ ಗಡಿ ಭಾಗದಲ್ಲಿದ್ದ ಪೇಶಾವರ್ (ಖೈಬರ್ ಪಾಸ್) ನ ಗ್ರ‍್ಯಾಂಡ್ ಟ್ರಂಕ್ ರೋಡ್ ಮತ್ತು ಕಲ್ಕತ್ತಾದಲ್ಲಿ ೧೮೫೭ ರಲ್ಲಿ ನಿರ್ಮಾಣವಾದ ರಸ್ತೆಗಳು ಪ್ರಖ್ಯಾತವಾದ ಪ್ರಾರಂಭದ ರಸ್ತೆಗಳು. ರೋಮನ್ನರು ರಸ್ತೆ ನಿರ್ಮಾಣದಲ್ಲಿ ನಿಪುಣರಾಗಿದ್ದರು, ಅದರಿಂದ ಎಲ್ಲಾ ರಸ್ತೆಗಳು ರೋಮ್‌ನಡೆಗೆ ಹೋಗುತ್ತದೆ? ಎಂಬ ನಾಣ್ಣುಡಿಯ ಅಕ್ಷರಶ: ಅರ್ಥ ಇದೇ.

ಕರ್ನಾಟಕದಲ್ಲಿ ೧೮೩೪ ಕ್ಕೆ ಪೂರ್ವದಲ್ಲಿ ಕಂದಾಯ ಅಧಿಕಾರಿಗಳು ಲೋಕೋಪಯೋಗಿ ಇಲಾಖೆಯ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದರು. ೧೮೩೪ ರಲ್ಲಿ ಒಬ್ಬ ಮರಮ್ಮತ್ ಅಧೀಕ್ಷಕರನ್ನು ಕಂದಾಯ ಇಲಾಖೆಯಡಿ ಲೋಕೋಪಯೋಗಿ ಕಾರ್ಯಗಳನ್ನು ನೋಡಿಕೊಳ್ಳುತ್ತಿದ್ದರು. ಕರ್ನಾಟಕ ರಾಜ್ಯದಲ್ಲಿ (ಅಂದಿನ ಮೈಸೂರು) ೧೮೫೬ ರಲ್ಲಿ ಲೋಕೋಪಯೋಗಿ ಇಲಾಖೆಯನ್ನು ಸೃಜಿಸಲಾಯಿತು. ೧೮೫೬ ರ ಹೊತ್ತಿಗೆ ಎಲ್ಲಾ ಜಿಲ್ಲಾ ಕೇಂದ್ರಗಳೂ ಬೆಂಗಳೂರಿಗೆ ರಸ್ತೆ ಸಂಪರ್ಕ ಹೊಂದಿದ್ದವು.

ಅಂದಿನ ಸಿಬ್ಬಂದಿ ವಿವರ ಈ ರೀತಿ ಇತ್ತು:

ಮುಖ್ಯ ಇಂಜಿನಿಯರ್

1

ಸಹಾಯಕ ಮುಖ್ಯ ಇಂಜಿನಿಯರ್

1

ಸಹಾಯಕ ಇಂಜಿನಿಯರ್

4

ಮೇಲು ಹಂತದ ಸಹಾಯಕರು

11

ಕೆಳ ಹಂತದ ಸಹಾಯಕರು

19

೧೮೫೬ ರಿಂದ೧೮೭೬ ರವರೆಗೆ ಲೋಕೋಪಯೋಗಿ ಇಲಾಖೆಯ ವೆಚ್ಚ ಮೂಲ ಕಾಮಗಾರಿಯ ಮೇಲೆ ರೂ.೯೯ ಲಕ್ಷ ಮತ್ತು ದುರಸ್ತಿ ಕಾಮಗಾರಿಗೆ ರೂ.೮೯ ಲಕ್ಷ ಆಗಿತ್ತು. ಅಂದರೆ ಯೋಜನೆ ಮತ್ತು ಯೋಜನೇತರ ವೆಚ್ಚಗಳು ಹೆಚ್ಚೂ ಕಡಿಮೆ ಒಂದೇ ಆಗಿತ್ತು. ಮಾರ್ಕ್ ಕಬ್ಬನ್ ರವರ ಸಮಯದಲ್ಲಿ (೧೮೩೪-೧೮೬೧) ಅಂದಿನ ಮೈಸೂರು ರಾಜ್ಯದಲ್ಲಿ ರಸ್ತೆಗಳನ್ನು ಉತ್ತಮ, ಪ್ರಾಂತೀಯ ಮತ್ತು ಗ್ರಾಮೀಣ ರಸ್ತೆಗಳೆಂದು ವರ್ಗೀಕರಿಸಲಾಗಿತ್ತು. ೧೮೯೭ ರಲ್ಲಿ ಪೂರ್ವ ಮತ್ತು ಪಶ್ಚಿಮ ಎಂದು ೨ ವೃತ್ತಗಳನ್ನು ಒಂದೊಂದು ಅಧೀಕ್ಷಕ ಇಂಜಿನಿಯರ್ ಹುದ್ದೆಯೊಂದಿಗೆ ಸೃಜಿಸಲಾಯಿತು. ಆದರೆ ೧೯೦೯ ರಲ್ಲಿ ಎರಡೂ ಹುದ್ದೆಗಳನ್ನು ಸಿಬ್ಬಂದಿ ಕಡಿತ ಮಾಡುವ ಸಮಿತಿಯ ಶಿಫಾರಸ್ಸಿನ ಆಧಾರದ ಮೇಲೆ ರದ್ದು ಮಾಡಲಾಯಿತು. ಕಲ್‌ನಲ್ ಸಿ. ಬೊವೆನ್, ಬಿ.ಇ. ರವರು ಮೊದಲನೇ ಮುಖ್ಯ ಇಂಜಿನಿಯರಾಗಿದ್ದರು ಮತ್ತು ಶ್ರೀ ವೈ.ಶ್ರೀನಿವಾಸ ರಾವ್‌ ಬಿ.ಎ. ರವರು ಮೈಸೂರು ರಾಜ್ಯದ ಮೊದಲನೇ ಮುಖ್ಯ ಇಂಜಿನಿಯರ್ ಆಗಿದ್ದರು.

ಈಗಲೂ ಸಹಾ ಅಸ್ತಿತ್ವದಲ್ಲಿರುವ ಪೂರ್ವದಲ್ಲಿ ನಿರ್ಮಾಣಗೊಂಡಿರುವ ಕೆಲವು ಕಟ್ಟಡಗಳು ಮತ್ತು ಅವುಗಳ ಅಂದಿನ ನಿರ್ಮಾಣ ವೆಚ್ಚದ ವಿವರಗಳನ್ನು ಕೆಳಕಂಡಂತೆ ನೀಡಲಾಗಿದೆ.

1867

ಬೆಂಗಳೂರು ಕೇಂದ್ರ ಕಾರಾಗೃಹ

Rs. 46,047

1868

ಬೌರಿಂಗ್ ಆಸ್ಪತ್ರೆ, ಬೆಂಗಳೂರು

Rs. 2,16,454

1879

ಸರ್ಕಾರಿ ವಸ್ತು ಸಂಗ್ರಹಾಲಯ

Rs. 48,335

೧೮೮೧ ರಿಂದ ೧೯೨೪ ರವರೆಗೆ ೪೨ ವರ್ಷಗಳ ಅವಧಿಯಲ್ಲಿ ಈ ಕೆಳಕಂಡ ಕಟ್ಟಡಗಳನ್ನು ನಿರ್ಮಿಸಲಾಯಿತು.

ಕಟ್ಟಡಗಳು

ವರ್ಷ

ವೆಚ್ಚ (ರೂಗಳಲ್ಲಿ)

ಸಾರ್ವಜನಿಕ ಕಛೇರಿಗಳು (ಬೆಂಗಳೂರು)

1869 –1917

5,95,991

ಸೆಂಟ್ರಲ್ ಕಾಲೇಜು (ಬೆಂಗಳೂರು)

1882-1924

5,44,599

ಮಹಾರಾಜ ಕಾಲೇಜು (ಮೈಸೂರು)

1894

2,08,000

ಸಾರ್ವಜನಿಕ ಕಛೇರಿಗಳು (ಮೈಸೂರು)

1895

1,75,506

ವಿಕ್ಟೋರಿಯಾ ಆಸ್ಪತ್ರೆ (ಬೆಂಗಳೂರು)

1896

7,84,000

ಲಾ ಕೋರ್ಟ್ ಕಟ್ಟಡಗಳು (ಮೈಸೂರು)

1899

21,470

ಸರ್. ಶೇಷಾದ್ರಿ ಸ್ಮಾರಕ ಸಭಾಂಗಣ (ಬೆಂಗಳೂರು)

1907

83,624

ಚಾಮರಾಜೇಂದ್ರ ತಾಂತ್ರಿಕ ಸಂಸ್ಥೆ (ಮೈಸೂರು)

1917

2,44,516

ಮಿಂಟೋ ಕಣ್ಣಿನ ಆಸ್ಪತ್ರೆ (ಬೆಂಗಳೂರು)

1917

2,82,000

ಸರ್ಕಾರಿ ಪ್ರೌಢ ಶಾಲೆ (ಬೆಂಗಳೂರು)

1917

1,55,502

ಕೃಷ್ಣರಾಜೇಂದ್ರ ಆಸ್ಪತ್ರೆ (ಮೈಸೂರು)

1918

3,65,000

ವಿಶ್ವವಿದ್ಯಾಲಯ ಕಟ್ಟಡಗಳು (ಮೈಸೂರು)

1920-22

2,41,262

ವಾಣಿವಿಲಾಸ ಸಂಸ್ಥೆ (ಬೆಂಗಳೂರು)

 

69,567

ರ‍್ನ್ಹಿಲ್ ಪ್ಯಾಲೇಸ್ ಊಟಿ

 

4,78,000

೧೯೨೨ ರಲ್ಲಿ ಮೈಸೂರಿನ ಇಂಜಿನಿಯರುಗಳ ಸಂಬಳದ ವಿವರ:

ಮುಖ್ಯ ಇಂಜಿನಿಯರು

Rs.500

ಸಹಾಯಕ ಮುಖ್ಯ ಇಂಜಿನಿಯರು

Rs.250

ಮೇಲು ಹಂತದ ಸಹಾಯಕರು

Rs. 80

ಆದರೆ ೧ ರೂಗೆ ೪.೫ ಸೇರು ಅಕ್ಕಿ ಮತ್ತು ೧೦.೩ ಸೇರು ರಾಗಿ ದೊರೆಯುತ್ತದೆ (ಅಂದರೆ ೧ ರೂಗೆ ೫ ಕಿಲೋ ಅಕ್ಕಿ ಮತ್ತು ೧೨ ಕೆಜಿ ರಾಗಿ ) ; ಇಂದು ೧ ಕೆಜಿ ಅಕ್ಕಿಗೆ ೧೫ ರಿಂದ ೨೦ ರೂ ಮತ್ತು ೧ ಕೆಜಿ ರಾಗಿಗೆ ರೂ.೮.
೧೯೩೦ ರಲ್ಲಿ ೨೧೨ ಮೈಲುಗಳಷ್ಟು (೩೪೧ ಕಿ.ಮೀ.) ಪ್ರಾಂತೀಯ ರಸ್ತೆಗಳು ಮತ್ತು ೪೫೮ ಮೈಲುಗಳಷ್ಟು (೭೩೭ ಕಿ.ಮೀ.) ಜಿಲ್ಲಾ ರಸ್ತೆಗಳನ್ನು ರಾಜ್ಯವು ಹೊಂದಿತ್ತು.

ರಸ್ತೆಯ ವರ್ಗೀಕರಣ

ಉದ್ದ (ಕಿ.ಮೀ.ಗಳಲ್ಲಿ)

ರಾಷ್ಟಿçÃಯ ಹೆದ್ದಾರಿ

864

ರಾಜ್ಯ ಹೆದ್ದಾರಿ

5,983

ಜಿಲ್ಲಾ ಮುಖ್ಯ ರಸ್ತೆ

7,006

ಇತರೆ ಜಿಲ್ಲಾ ರಸ್ತೆಗಳು

5,951

ಗ್ರಾಮೀಣ ರಸ್ತೆಗಳು

2,373

TDB ರಸ್ತೆಗಳು

19,222

ಅರಣ್ಯ ಇಲಾಖೆಯ ರಸ್ತೆಗಳು

1,783

ಒಟ್ಟು

43,182

ಆಧಾರ: ಬ್ಯೂರೋ ಆಫ್ ಇಕನಾಮಿಕ್ಸ್ ಮತ್ತು ಸ್ಟ್ಯಾಟಿಸ್‌ಟಿಕ್ಸ್, ಮೈಸೂರು ಸರ್ಕಾರ ೧೯೬೩ ೧೯೬೦-೬೧ ಅಂಕಿ ಅಂಶದ ಆಯ್ದ ಭಾಗ

ಇತ್ತೀಚಿನ ನವೀಕರಣ​ : 29-10-2020 12:52 PM ಅನುಮೋದಕರು: Approver kpwd


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಲೋಕೋಪಯೋಗಿ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080