ದೂರುಗಳು

ಆಡಳಿತಾತ್ಮಕ ರಚನೆ

ಆಡಳಿತಾತ್ಮಕ ರಚನೆ

 

 

   

      ಡಾ. ಎಸ್‌. ಸೆಲ್ವಕುಮಾರ್‌, ಭಾ.ಆ.ಸೇ,

         ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಲೋಕೋಪಯೋಗಿ ಇಲಾಖೆ

 

 

 

     

    ಶ್ರೀ ಸಿ. ಸತ್ಯನಾರಾಯಣ,

ಸರ್ಕಾರದ ಕಾರ್ಯದರ್ಶಿಗಳು, ಲೋಕೋಪಯೋಗಿ ಇಲಾಖೆ

 

 • ಲೋಕೋಪಯೋಗಿ ಇಲಾಖೆಯು ರಾಜ್ಯದಲ್ಲಿರುವ ರಾಷ್ಟ್ರೀಯ ಹೆದ್ದಾರಿಗಳು, ರಾಜ್ಯ ಹೆದ್ದಾರಿಗಳು ಮತ್ತು ಜಿಲ್ಲಾ ಮುಖ್ಯ ರಸ್ತೆಗಳ ಕಾಮಗಾರಿ ಮತ್ತು ನಿರ್ವಹಣೆ ಹಾಗೂ ಸರ್ಕಾರಿ ಕಟ್ಟಡಗಳ ನಿರ್ಮಾಣ ಮತ್ತು ನಿರ್ವಹಣೆ ಕಾರ್ಯಗಳ ಜವಾಬ್ದಾರಿ ಹೊಂದಿರುತ್ತದೆ. ಈ ಇಲಾಖೆಯು ಠೇವಣಿ ವಂತಿಗೆ ಕಾಮಗಾರಿಗಳು (Deposit Contribution Works) ಅಡಿಯಲ್ಲಿ ಇತರೆ ಇಲಾಖೆಗಳ ಪರವಾಗಿ ನಿರ್ಮಾಣಕಾರ್ಯ ಸಹಾ ನಿರ್ವಹಿಸುತ್ತದೆ. ಸಚಿವಾಲಯದಲ್ಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಮತ್ತು ಸರ್ಕಾರದ ಕಾರ್ಯದರ್ಶಿಗಳು, ಲೊಕೋಪಯೋಗಿ ಇಲಾಖೆ ಇವರು ಇಲಾಖಾ ಮುಖ್ಯಸ್ಥರಾಗಿರುತ್ತಾರೆ.
 • ಇಲಾಖೆಯು ಹಂತದಲ್ಲಿ ಮೂರು ವಲಯಗಳಿವೆ - ಸಂಪರ್ಕ ಮತ್ತು ಕಟ್ಟಡಗಳು, ದಕ್ಷಿಣ ವಲಯ, ಸಂಪರ್ಕ ಮತ್ತು ಕಟ್ಟಡಗಳು, ಉತ್ತರ ವಲಯ, ಸಂಪರ್ಕ ಮತ್ತು ಕಟ್ಟಡಗಳು, ಈಶಾನ್ಯ ವಲಯ, ಸಂಪರ್ಕ ಮತ್ತು ಕಟ್ಟಡಗಳು, ಕೇಂದ್ರ ವಲಯ ಹಾಗೂ ರಾಷ್ಟ್ರೀಯ ಹೆದ್ದಾರಿ ವಲಯ. ಪ್ರತಿ ವಲಯಕ್ಕೂ ಮುಖ್ಯ ಇಂಜಿನಿಯರರು ಮುಖ್ಯಸ್ಥರಾಗಿರುತ್ತಾರೆ. ವಲಯ ಕಛೇರಿಗಳು ವೃತ್ತ, ವಿಭಾಗ, ಮತ್ತು ಉಪ ವಿಭಾಗ ಕಛೇರಿಗಳನ್ನು ಹೊಂದಿವೆ. ಉಪ ವಿಭಾಗ ಕಛೇರಿಗಳು ವಿಭಾಗದ ಕಛೇರಿಯ ಅಧೀನದಲ್ಲಿರುತ್ತದೆ.  ವಿಭಾಗದ ಕಛೇರಿಗಳು ವೃತ್ತ ಕಛೇರಿಯ ಅಧೀನದಲ್ಲಿರುತ್ತದೆ.  ವೃತ್ತ ಕಛೇರಿಗಳು ವಲಯದ ಕಛೇರಿಯ ಅಧೀನದಲ್ಲಿರುತ್ತದೆ. 
 • ಪ್ರತಿಯೊಂದು ವೃತ್ತ ಕಛೇರಿಗೆ ಅಧೀಕ್ಷಕ ಇಂಜಿನಿಯರು ಮುಖ್ಯಸ್ಥರಾಗಿರುತ್ತಾರೆ. ವಿಭಾಗ ಕಛೇರಿಗಳಿಗೆ ಕಾರ್ಯಪಾಲಕಇಂಜಿನಿಯರರು ಮುಖ್ಯಸ್ಥರಾಗಿರುತ್ತಾರೆ. ಉಪ ವಿಭಾಗದ ಕಛೇರಿಗಳಿಗೆ ಸಹಾಯಕ ಕಾರ್ಯಪಾಲಕ ಇಂಜಿನಿಯರರು ಮುಖ್ಯಸ್ಥರಾಗಿರುತ್ತಾರೆ.
 • ಮುಖ್ಯ ಇಂಜಿನಿಯರರು, ರಾಷ್ಟ್ರೀಯ ಹೆದ್ದಾರಿ ಇವರು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮತ್ತು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಮಂತ್ರಾಲಯದ (MoRTH) ಕಾಮಗಾರಿಗಳನ್ನು ಪ್ರಾಥಮಿಕವಾಗಿ ಕಾರ್ಯಗತಗೊಳಿಸುತ್ತಾರೆ. ಈ ಉದ್ದೇಶಕ್ಕಾಗಿ ಬಹುಪಾಲು ವೆಚ್ಚವನ್ನು ಭಾರತ ಸರ್ಕಾರವು ಭರಿಸುತ್ತದೆ. ರಾಷ್ಟ್ರೀಯ ಹೆದ್ದಾರಿ ವಲಯವು ಎರಡು ವೃತ್ತಗಳನ್ನು ಹಾಗೂ ಏಳು ವಿಭಾಗಗಳನ್ನು ಹೊಂದಿದೆ.
 • ಕರ್ನಾಟಕ ರಸ್ತೆ ಆಭಿವೃದ್ಧಿ ನಿಗಮ ನಿಯಮಿತ (KRDCL) ನ್ನು೨೧ನೇ ಜುಲೈ, ೧೯೯೯ರ ಲ್ಲಿ ಕರ್ನಾಟಕ ಸರ್ಕಾರದ ಸಂಪೂರ್ಣ ಸ್ವಾಮ್ಯದಲ್ಲಿ ರಾಜ್ಯದಲ್ಲಿ ರಸ್ತೆಗಳ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಉದ್ದೇಶಿಸಿ ಸ್ಥಾಪಿಸಿರುವಸಂಸ್ಥೆಯಾಗಿದೆ. ವ್ಯವಸ್ಥಾಪಕ ನಿರ್ದೇಶಕರು ಈ ಸಂಸ್ಥೆಯ ಮುಖ್ಯಸ್ಥರು.
 • ಕರ್ನಾಟಕ ಸರ್ಕಾರದ ಲೋಕೋಪಯೋಗಿ ಇಲಾಖೆಯ ನೇತೃತ್ವದಲ್ಲಿ ರಾಜ್ಯದ ರಸ್ತೆಗಳನ್ನು ವಿಶ್ವಬ್ಯಾಂಕ್ ನೆರವಿನೊಂದಿಗೆ ಅಭಿವೃದ್ಧಿಪಡಿಸಲು ಸ್ಥಾಪಿಸಿದ ಸಂಸ್ಥೆ ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ( KSHIP). ಮುಖ್ಯಯೋಜನಾಧಿಕಾರಿಗಳು ಈ ಸಂಸ್ಥೆಯ ಮುಖ್ಯಸ್ಥರಾಗಿರುತ್ತಾರೆ.
 • ಕರ್ನಾಟಕ ಸರ್ಕಾರವು ಹೆಚ್ಚುವರಿ ಅನುದಾನವನ್ನು ಒದಗಿಸಿ ಯೋಜನಾ ಮಾದರಿಯಲ್ಲಿ ರಸ್ತೆಗಳನ್ನು ಪರಿಣಾಮಕಾರಿಯಾಗಿ ಅಭಿವೃದ್ಧಿಪಡಿಸಲು ನಿರ್ಧರಿಸಿ ಯೋಜನಾ ಅನುಷ್ಟಾನ ಘಟಕವನ್ನು ಕೆಶಿಪ್‌ ಮಾದರಿಯಲ್ಲಿ ಸ್ಥಾಪಿಸಲು ಉದ್ದೇಶಿಸಿ, ಯೋಜನಾ ಅನುಷ್ಟಾನ ಘಟಕ, ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯನ್ನು ಸರ್ಕಾರದ ಆದೇಶ ಸಂ: PWD:137:EAP:2011, Bangalore Dt:4-11-2011 ಸೃಜಿಸಿದೆ. ಈ ಯೋಜನಾ ಅನುಷ್ಟಾನ ಘಟಕ, ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಚಟುವಟಿಕೆಗಳನ್ನು ಉಸ್ತುವಾರಿ ಮಾಡಲು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಲೋಇ ರವರ ಅಧ್ಯಕ್ಷತೆಯಲ್ಲಿ ಒಂದು ಸ್ಟೀರಿಂಗ್‌ ಕಮಿಟಿಯನ್ನು ರಚಿಸಲಾಗಿದೆ. ಕಾರ್ಯಕ್ರಮದ ಅನುಷ್ಟಾನ, ರಸ್ತೆಗಳ ಆಯ್ಕೆ ಹಾಗೂ ಆಡಳಿತಾತ್ಮಕ ಅನುಮೋದನೆಗಳನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಅ‍ಧ್ಯಕ್ಷತೆಯಲ್ಲಿ ಎಂಪವರ್ಡ್‌ ಕಮಿಟಿಯಲ್ಲಿ ಪಡೆಯಬೇಕಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 12-07-2023 04:59 PM ಅನುಮೋದಕರು: Approver kpwd


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಲೋಕೋಪಯೋಗಿ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080